ಕ್ಯೂರೇಟಿವಿಟಿ ಮೀಡಿಯಾ ಪ್ರಾಯೋಜಕತ್ವದಲ್ಲಿ ಮೈಸೂರು ಸೋಷಿಯಲ್ಸ್ ಹಾಗೂ 11 ಇಂಟರ್ ನ್ಯಾಷನಲ್ ಸಹಯೋಗದಲ್ಲಿ ರಾಷ್ಟ್ರೀಯ ಮಟ್ಟದ ಮಿಶ್ರಣ ಸಮರ ಕಲೆ (Mixed martial arts) ‘X-1 ಫೈಟ್ ನೈಟ್’ ಕುಸ್ತಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ ಎಂದು ಮೈಸೂರು ಸೋಷಿಯಲ್ ಮಾಲೀಕ ವಿನಯ್ ಶಂಕರ್ ತಿಳಿಸಿದರು. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಈ ಪಂದ್ಯಾವಳಿಯೂ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ಮೈಸೂರು ಸೋಷಿಯಲ್ಸ್ ನಲ್ಲಿ ಮಾ.30ರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 10ರವರೆಗೆ ಒಟ್ಟು 10 ಕೇಜ್ ಕುಸ್ತಿ ಪಂದ್ಯಗಳು ನಡೆಯಲಿದ್ದು, ಪಂದ್ಯವು 10 ನಿಮಿಷಗಳ ಕಾಲಾವಧಿಯಾಗಿದ್ದು ಪ್ರತಿ ಮೂರು ನಿಮಿಷಗಳ ಒಂದು ಸುತ್ತಿನಂತೆ ನಡೆಯಲಿದೆ, ರಾಷ್ಟ್ರಮಟ್ಟದ ಕುಸ್ತಿಪಟು ಬಸವೇಶ್ ಅವರು ಹೈದ್ರಾಬಾದಿನ ಸೈಯದ್ ಮುಸ್ವಾಕ್ ಅವರೊಂದಿಗೆ ಹಾಗೂ ಮಹಿಳೆಯರಾದ ಅಂಜಲಿ ಗುಪ್ತಾ ಅವರು ಕಿರಣ್ ಅವರುಗಳು ಸೆಣಸಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಂದ್ಯಾವಳಿಯು ಅತಿ ರೋಮಾಂಚನಕಾರಿ, ಮೈಪುಳಕಗೊಳಿಸುವ ಪಂದ್ಯಾವಾಳಿಯಾಗಿದ್ದು, ಎದುರಾಳಿ ಸಂಪೂರ್ಣ ಸೋಲುವವರೆಗೂ ಹೊಡೆದಾಡಲಿದ್ದಾರೆ.
ಜೊತೆಗೆ, ಇದು ಡಬ್ಲ್ಯುಡಬ್ಲ್ಯುಎಫ್‌ನಂತೆ ನಕಲಿ ಹೋರಾಟ ಎನಿಸಿಕೊಳ್ಳದ ಕಾರಣ, ಈ ವೇಳೆ ಹೋರಾಟಗಾರ ಗಾಯಗೊಳ್ಳುವ ಸಾಧ್ಯತೆಯೂ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಪಂದ್ಯಾವಳಿಯಲ್ಲಿ ಅಂಜಲಿಗುಪ್ತಾ ಸೇರಿದಂತೆ ಮೈಸೂರಿನ ಒಟ್ಟು 8 ಜನರು, ಅವರೊಂದಿಗೆ ಆಂದ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ಹಲವಾರು ಖ್ಯಾತ ಕುಸ್ತಿಪಟುಗಳು ಭಾಗಿಯಾಗಲಿದ್ದಾರೆ ಎಂದರು. ಹೋರಾಟಗಾರ್ತಿ ಅಂಜಲಿ ಗುಪ್ತ, ಅಶ್ವಿನ್‌ಕುಮಾರ್, ಬಸವೇಶ್, ಸಮಿತ್ ಭಟ್ ಹಾಜರಿದ್ದರು.