ಅದ್ದೂರಿ 36ನೇ ಬ್ರಹ್ಮರಥೋತ್ಸವಕ್ಕೆ ಕ್ಷಣಗಣನೆ

ಗೌರಿಬಿದನೂರು: ಶ್ರೀ ಶನೈಶ್ವರ ಸ್ವಾಮಿಯವರ 36ನೇ ವಾರ್ಷಿಕ ಬ್ರಹ್ಮರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ದೇವಸ್ಥಾನ ಒಳಭಾಗ ಹಾಗೂ ಹೊರಭಾಗ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ನಗರದ ಶ್ರೀ ಸಾಯಿ ಪ್ಲವರ್ ಡೆಕೋರೇಟರ್ಸ್ ತಂಡ ಬಹಳ ಅಚ್ಚುಕಟ್ಟಾಗಿ ವಿವಿಧ ರೀತಿಯ ಅಲಂಕಾರಿಕ ಹೂ ಬಳಸಿ, ಹಲವು ವಿನ್ಯಾಸಗೊಳೊಂದಿಗೆ ದೇವಸ್ಥಾನಕ್ಕೆ ಹೊಸ ಮೆರುಗು ನೀಡಿದ್ದಾರೆ. ನಾಳೆ ಸಾವಿರಾರು ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ.

Translate