…..ಸಾರ್ವಜನಿಕರ ಗಮನಕ್ಕೆ ….. ಹುಣಸೂರು ಪೊಲೀಸ್ ಠಾಣಾವತಿಯಿಂದ ಕೋರಿಕೊಳ್ಳುವುದೇನೆಂದರೆ ,ಹುಣಸೂರು ತಾಲ್ಲೂಕಿನ ಹಾಗು ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಸೇರುವ ತಾಲ್ಲೂಕಿನ ಗ್ರಾಮಗಳ ಸುತ್ತ ಮುತ್ತ ಯಾರೇ ಕಂಬಳಿ ಇತರೆ ಹೊದಿಕೆ ಗಳನ್ನು ಮಾರಲು ತಮ್ಮ ಬಳಿ ಬಂದಲ್ಲಿ ಅವರ ಗುರುತಿನ ಚೀಟಿ ಹಾಗೂ ವಿಳಾಸವನ್ನು ಖಾತರಿ ಮಾಡಿಕೊಂಡು ಕೊಂಡುಕೊಳ್ಳುವುದು ಏಕೆಂದರೆ ಮಾರುವೇಶದಲ್ಲಿ ಕಂಬಳಿ ಮಾರುವವರಾಗಿ ಬಂದು ತಮ್ಮ ಮನೆಯ ಸಂಪೂರ್ಣ ವಿವರ ತಿಳಿದುಕೊಂಡು ಮನೆಕಳ್ಳತನ ದರೋಡೆ ಸುಲಿಗೆ ಇತ್ಯಾದಿ ಕಳ್ಳತನಗಳನ್ನು ಮಾಡುವ ಇರಾನಿ ಗ್ಯಾಂಗ್ ಎಂಬ ಹೆಸರಿನ ಹೊರ ರಾಜ್ಯಗಳಿಂದ ಬಂದ ಕಳ್ಳರು ಕಳ್ಳತನ ದರೋಡೆ ಸುಲಿಗೆ ಅತ್ಯಾಚಾರ ಮಾಡುತ್ತಿದ್ದು ಅವರ ಮೇಲೆ ನಿಗಾ ಇಡಲು ಮಾನ್ಯ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯು ತಿಳಿಸಿರುತ್ತದೆ .ಆದ್ದರಿಂದ ಈ ಮಾಹಿತಿಯನ್ನು ಆದಷ್ಟು ಎಲ್ಲಾ ಸಾರ್ವಜನಿಕರಿಗೆ ಹಂಚಿಕೊಳ್ಳುವುದು ಹೊರ ರಾಜ್ಯದ ಮಾರಾಟಗಾರರ ಬಗ್ಗೆ ಮಾಹಿತಿಯನ್ನು ನಿಮ್ಮ ನಿಮ್ಮ ಬೀಟ್ ಸಿಬ್ಬಂದಿಗಳಿಗೆ ಅಥವಾ ಹುಣಸೂರು ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು.
ಇಂತಿ,
ಸಬ್ ಇನ್ಸ್ ಪೆಕ್ಟರ್. ಹುಣಸೂರು ಪೋಲಿಸ್ ಠಾಣೆ