ಕಬ್ಬನ್ ಪಾರ್ಕ್​ನಲ್ಲಿ ಕಟ್ಟಡ ನಿರ್ವಣಕ್ಕೆ ವಿರೋಧ

ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ 7 ಅಂತಸ್ತಿನ ಕಟ್ಟಡ ನಿರ್ವಿುಸಲು ಅನá-ಮತಿ ನೀಡಿರá-ವುದನ್ನು ಖಂಡಿಸಿ ಭಾನುವಾರ ಕಬ್ಬನ್​ಪಾರ್ಕ್ ವಾಯá-ವಿಹಾರಿಗಳ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕಾಯ್ದೆ ಪ್ರಕಾರ ಉದ್ಯಾನದಲ್ಲಿ ಯಾವುದೇ ಕಟ್ಟಡ ನಿರ್ವಿುಸá-ವಂತಿಲ್ಲ. ಲಾಲ್​ಬಾಗ್ ಮಾದರಿಯಲ್ಲಿ ಕಬ್ಬನ್​ಪಾರ್ಕ್ ಅಭಿವೃದ್ಧಿಗೊಳಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, 300 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದ ಕಬ್ಬನ್​ಪಾರ್ಕ್ ಸದ್ಯ 150 ಎಕರೆಗೆ ಇಳಿದಿದೆ. ಈ ಜಾಗದ ಮೇಲೂ ಕೆಲವರ ಕೆಂಗಣ್ಣು ಬಿದ್ದಿದೆ. ಒಂದು ವೇಳೆ ಕಟ್ಟಡ ನಿರ್ವಿುಸುವುದೇ ನಿಮ್ಮ ಅಂತಿಮ ನಿರ್ಧಾರವಾದರೆ ನಮ್ಮ ಹೆಣದ ಮೇಲೆ ನಿರ್ವಿುಸಿ ಎಂದರು.

ಕಬ್ಬನ್ ಪಾರ್ಕ್ ವಾಯá-ವಿಹಾರಿಗಳ ಸಂಘದ ಅಧ್ಯಕ್ಷ ಎಸ್. ಉಮೇಶ್ ಮಾತನಾಡಿ, ಏಳು ಅಂತಸ್ತಿನ ಕಟ್ಟಡ ನಿರ್ವಣಕ್ಕೆ ಅನುಮತಿ ನೀಡಿರುವ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ನಟಿಯರಾದ ವಸುಂಧರಾ ದಾಸ್, ಅಕ್ಷತಾ ರಾವ್, ಪರಿಸರ ತಜ್ಞರು, ಸಂಘ-ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು, ವಾಯುವಿಹಾರಿಗಳು ಸೇರಿ ನೂರಾರು ಮಂದಿ ಪಾಲ್ಗೊಂಡಿದ್ದರು.

ಹೈಕೋರ್ಟ್ ಅನುಮತಿ1975ರಲ್ಲಿ ಕಬ್ಬನ್ ಉದ್ಯಾನದಲ್ಲಿ ಕಟ್ಟಡ ನಿರ್ವಣವನ್ನು ನಿಷೇಧಿಸಲಾಯಿತು. ಇದಾದ ಬಳಿಕ ಕರ್ನಾಟಕ ಉದ್ಯಾನ ಕಾಯ್ದೆ ಸೆಕ್ಷನ್4ರ ಪ್ರಕಾರ ಎಲ್ಲ ಉದ್ಯಾನಗಳಲ್ಲೂ ಕಟ್ಟಡ ನಿರ್ಮಾಣ ನಿಷೇಧಿಸಲಾಯಿತು. ಕಬ್ಬನ್ ಉದ್ಯಾನ ಹಾಗೂಲಾಲ್​ಬಾಗ್ ಪ್ರದೇಶದಲ್ಲಿ ಯಾರಿಗೂ ಭೂಮಿ ನೀಡಬಾರದು ಹಾಗೂ ಯಾವುದೇ ನಿರ್ವಣಕ್ಕೆ ಅನುಮತಿ ನೀಡಬಾರದು ಎಂದು ನಿರ್ದೇಶಿಸಿತ್ತು. ಕಬ್ಬನ್​ಪಾರ್ಕ್​ನಲ್ಲಿರುವ ವಕೀಲರ ಪರಿಷತ್ ಕಟ್ಟಡ ಕೆಡವಿ, ಅಲ್ಲಿ ಏಳಂತಸ್ತಿನ ಹೊಸ ಕಟ್ಟಡ ನಿರ್ವಿುಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.

Translate