ಕಾಂಗ್ರೆಸ್ ಮುಖಂಡರು ದುರಂಹಕಾರ ಪ್ರದರ್ಶಿಸಿದ ಕಾರಣ ಬಿಜೆಪಿ ಗೆದ್ದಿದೆ : ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ

ಮಂಗಳೂರು: ಕಾಂಗ್ರೆಸ್ ಮುಖಂಡರು ದುರಂಹಕಾರ ಪ್ರದರ್ಶಿಸಿದ ಕಾರಣ ಬಿಜೆಪಿ ಗೆದ್ದಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು ನೀವು ಹೀಗೆ ದುರಂಹಕಾರ ಮಾಡಿದರೆ ಬಿಜೆಪಿ ತಡೆಯಲು ಸಾಧ್ಯವಿಲ್ಲ ಎಂದು ಪಕ್ಷದವರಿಗೆ ಹೇಳಿದೆ. ಕೈಮುಗಿದು, ಕಣ್ಣೀರು ಸುರಿಸಿ ಹೇಳಿದೆ. ಆದರೂ ಕೇಳಲಿಲ್ಲ ಎಂದರು.

ನಾನು ಹೇಳಿದನ್ನು ಪಕ್ಷದವರು ಅರ್ಥ ಮಾಡಿಕೊಳ್ಳಲಿಲ್ಲ. ಸರಿಮಾಡಿಕೊಂಡು ಹೋಗಿ ದುರಂಹಕಾರ ಮಾಡಬೇಡಿ ಅಂದರೂ ಕೇಳಲಿಲ್ಲ. ಈಗ ಅನುಭವಿಸುತ್ತಿದ್ದಾರೆ, ಇನ್ನೂ ಕೂಡ ಅನುಭವಿಸಲಿದ್ದಾರೆ ಎಂದು ತಿಳಿಸಿದರು.

Translate