ಬಾಗೇಪಲ್ಲಿ: ಬಿಬಿಎಂಪಿ ಗ್ರೌಂಡ್ ಹಂಪಿ ನಗರ ಬೆಂಗಳೂರು ನ. 10ರಂದು ನಡೆದ 4 ನೇ ಎಸ್.ಐ.ಕಪ್ ಒಪನ್ ಸ್ಟೇಟ್ ತೈಕಾಂಡೋ ಚಾಂಪಿಯನ್ ಶಿಪ್-2019ರ 34 ಕೆಜಿ ಸ್ಪರ್ಧೆಯಲ್ಲಿ ಕರ್ನಾಟಕ ಪರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕು 7ನೇ ವಾರ್ಡ್ ನಿವಾಸಿ ಎಸ್.ರಾಘವೇಂದ್ರ ಮತ್ತು ಎಸ್ ಭಾರತಿ ಎಂಬ ದಂಪತಿಗಳ ಮಗ ಲೋಹಿತ್ .ಆರ್ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದಿದ್ದಾರೆ.
ಚಿ.ಲೋಹಿತ್ .ಆರ್ ರವರ ಸಾಧನೆ ಬಾಗೇಪಲ್ಲಿ ನಾಗರಿಕರು ಹಾಗೂ ಹಿತೈಷಿಗಳು, ಪೋಷಕರು, ಹಾಗೂ ತರಬೇತುದಾರ ಲಕ್ಷ್ಮೀನಾರಾಯಣ, ಸುರೇಶ ತೈಕಾಂಡೋ ಶಿಕ್ಷಕ ರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತದೆ.ಇನ್ನೂ ಹೆಚ್ಚು ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.