ದೇವರ ವಿಗ್ರಹವನ್ನ ವಿರೂಪಗೊಳಿಸಿರುವ ಪೂಜಾರಿ, ದೇವಸ್ಥಾನದ ಅರ್ಚಕರಾದ ಚಂದ್ರಶೇಖರ್ ರನ್ನ ವಜಾ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ

ತಿ.ನರಸೀಪುರ: ದೇವರ ವಿಗ್ರಹವನ್ನ ವಿರೂಪಗೊಳಿಸಿರುವ ಪೂಜಾರಿ.

ಪೂಜಾರಿ ಸಮರಕ್ಕೆ ಸಿದ್ದವಾದ ಅಪಾರ ಭಕ್ತ ವೃಂದ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಉಕ್ಕಲಗೆರೆ ಗ್ರಾಮದಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಘಟನೆ.

ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಅರ್ಚಕ ಚಂದ್ರಶೇಖರ್ ದೇವರ ವಿಗ್ರಹ ವಿರೂಪಗೊಳಿಸಿರುವ ವ್ಯಕ್ತಿ.

ನೂರಾರು ವರ್ಷಗಳ ಇತಿಹಾಸವುಳ್ಳ ದೇವಸ್ಥಾನ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ.

ದೇವಾಲಯ ಅರ್ಚಕ ಚಂದ್ರಶೇಖರ್ ವಿರುದ್ದ ತಾಲ್ಲೂಕು ದಂಡಾಧಿಕಾರಿಗೆ ದೂರು ಸಲ್ಲಿಕೆ.

ಇದೆ ವೇಳೆ ಮಾತನಾಡಿದ ದೇವಾಲಯದ ಭಕ್ತರು..

ಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಹಲವು ವರ್ಷಗಳ ಇತಿಹಾಸವಿದೆ.

ಅಲ್ಲದೇ ದೇವಸ್ಥಾನವು ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದೆ.

ಮೂಲ ವಿಗ್ರಹಕ್ಕೂ ಪ್ರಸ್ತುತ ದೇವಸ್ಥಾನದಲ್ಲಿ ಇರುವ ಮೂರ್ತಿಗೂ ತುಂಬಾ ವ್ಯತ್ಯಾಸವಿದೆ.

ಭಕ್ತಾಧಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ.

ಕೂಡಲೇ ದೇವಸ್ಥಾನದ ಅರ್ಚಕರಾದ ಚಂದ್ರಶೇಖರ್ ರನ್ನ ವಜಾ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಲಾಯಿತು.

Translate