“ಯಜಮಾನ್ರೋತ್ಸವ” Twitter Trend before 50 Days of Dr.Vishnuvardhan’s Birthday.

ಚಂದನವನದ ಯಜಮಾನ್ರು, ಪ್ರೀತಿಯಿಂದ ಸಾಹಸಸಿಂಹ ಅಂತ ಕರೆಸಿಕೊಳ್ಳುವ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೂ 50 ದಿನಗಳ ಮುಂಚೆ ಅಭಿಮಾನಿಗಳೆಲ್ಲಾ ಸೇರಿ ಟ್ವಿಟ್ಟರ್ ಟ್ರೆಂಡ್ ಮಾಡಿ ದೇಶಾದ್ಯಂತ ಸದ್ದು ಮಾಡ್ತಿದ್ದಾರೆ. #50DaysForDrVishnuBday ಎಂಬ ಟ್ಯಾಗ್ ಮೂಲಕ ಎಲ್ಲಾ ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಮೇಲಿನ ಅಭಿಮಾನವನ್ನು ಟ್ವಿಟ್ ಗಳ ಮೂಲಕ ಅರ್ಪಿಸಿದ್ದಾರೆ.

ಕೋಟಿಗೊಬ್ಬನ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ಈ ತರದ ಸಂಭ್ರಮಾಚರಣೆ ಮಾಡುತ್ತಿರೋದು ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂತಸ ತಂದಿದೆ. ಅನೇಕ ಸೆಲೆಬ್ರೆಟಿಗಳು ಸಹ ಟ್ವಿಟ್ ಮಾಡಿ , ವಿಷ್ಣು ಸರ್ ಬಗೆಗಿನ ಅಭಿಮಾನವನ್ನು ತೋರಿದ್ದು, ವಿಷ್ಣು ಅಭಿಮಾನಿಗಳಲ್ಲಿ ಮತ್ತಷ್ಟು ಸಂತಸ ತಂದಿದೆ.

ಅಭಿನಯ ಭಾರ್ಗವನ ಸಾಧನೆಗೆ ಅಭಿಮಾನಿಗಳ ಈ ಅಭಿಮಾನ ನಿಜಕ್ಕೂ ಅವಿಸ್ಮರಣೀಯ. ಕನ್ನಡ. ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ನಮ್ ಜೊತೆ ಇಲ್ಲದಿದ್ದರೂ ಅವರ ಹೆಸರು ಎಂದಿಗೂ ಅಜರಾಮರ. ವಿಷ್ಣುಸೇನಾ ಸಮಿತಿ ಟ್ವಿಟ್ಟರ್ ಟ್ರೆಂಡ್ ಆಯೋಜಿಸಿದ್ದು, ಹುಟ್ಟುಹಬ್ಬಕ್ಕೂ ಸಾಕಷ್ಟು ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಲು ನಿರ್ಧರಿಸಲಾಗಿದೆ.

Translate