ನವದೆಹಲಿ:ಮೋರಿಸ್ ಗ್ಯಾರೇಜಸ್ (ಎಂಜಿ) ಸಂಸ್ಥೆಯು ವಾಯು ಮಾಲಿನ್ಯಮುಕ್ತ ಪ್ರಯಾಣದ ಅನುಭವ ನೀಡುವ ವಿದ್ಯುತ್ಚಾಲಿತ ಸೌಲಭ್ಯ ಹಾಗೂ ಅಂತರ್ಜಾಲ ಸೇವೆ ಹೊಂದಿರುವ ‘ಎಸ್ಯುುವಿ ಝುಡ್ಎಸ್’ ಕಾರನ್ನು ನವದೆಹಲಿಯಲ್ಲಿ ಇತ್ತೀಚೆಗೆ ಅನಾವರಣ ಮಾಡಲಾಯಿತು.
2020ರ ಜನವರಿಯಲ್ಲಿ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆಯಿದೆ. ಪರಿಸರಸ್ನೇಹಿ ತಂತ್ರಜ್ಞಾನ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಕಾರನ್ನು ತಯಾರಿಸಲಾಗಿದ್ದು, ‘ಸಿಎ ಟಿಎಲ್’ ನಿರ್ವಿುಸಿದ ಲೀಥಿಯಂ ಅಯಾನ್ 44.5 ಕಿಲೋವಾಟ್ ಬ್ಯಾಟರಿಯನ್ನು ಬಳಕೆ ಮಾಡಲಾಗಿದೆ.
143 ಅಶ್ವಶಕ್ತಿ : ಕಾರಿನ ಬ್ಯಾಟರಿಯನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 340 ಕಿ.ಮೀ ಪ್ರಯಾಣ ಮಾಡಬಹುದು. 143 ಹಾರ್ಸ್ ಪವರ್ ಹೊಂದಿದ್ದು, ಚಾಲನೆಗೊಂಡ ಕೇವಲ 8.5 ಸೆಕೆಂಡ್ಗಳಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಕಾರಿನಲ್ಲಿ ಚಾರ್ಜಿಂಗ್ ಕೇಬಲ್ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಲ್ಲದೆ, ಮನೆ, ಮಳಿಗೆ ಅಥವಾ ವಿದ್ಯುತ್ ಸಂಪರ್ಕವಿರುವೆಡೆ ಚಾರ್ಜಿಂಗ್ ಮಾಡಬಹುದು. ಬ್ಯಾಟರಿ ಖಾಲಿಯಾಗುವ ಸಂಭವವಿದ್ದಾಗ ಹತ್ತಿರದ ಚಾರ್ಜಿಂಗ್ ಕೇಂದ್ರಗಳ ಬಗ್ಗೆ ಮಾಹಿತಿ ನೀಡುತ್ತದೆ.
ಡಿಸಿ ಫಾಸ್ಟ್ ಚಾರ್ಜಿಂಗ್ : ಕಾರಿನ ಬ್ಯಾಟರಿ ಪೂರ್ಣವಾಗಿ ಚಾರ್ಜ್ ಮಾಡಲು 6ರಿಂದ 8 ಗಂಟೆಗಳು ಬೇಕಾಗುತ್ತದೆ. ಮಾಲೀಕರಿಗೆತಮ್ಮ ಮನೆ ಹಾಗೂ ಆಫೀಸ್ಗಳಲ್ಲಿ ಚಾರ್ಜ್ ಮಾಡಿಕೊಳ್ಳಲು ಎಸಿ ವೇಗದ ಚಾರ್ಜರ್ ಒದಗಿಸಲಾಗುತ್ತಿದೆ. ಸಂಸ್ಥೆಯು ಎಂಜಿ ಮೋಟಾರ್ ಶೋರೂಂಗಳಲ್ಲಿ ಡಿಸಿ ಸೂಪರ್ ಫಾಸ್ಟ್ ಚಾಜಿಂಗ್ ಸೌಲಭ್ಯ ಒದಗಿಸಲು ಚಿಂತನೆ ನಡೆಸಿದೆ. ಡಿಸಿ ಫಾಸ್ಟ್ ಚಾರ್ಜಿಂಗ್ನಿಂದ ಕೇವಲ 50 ನಿಮಿಷದಲ್ಲಿ ಶೇ. 80 ಚಾರ್ಜ್ ಮಾಡಬಹುದು.
ಶುದ್ಧ ಗಾಳಿ ನೀಡುವ ಕಾರು :ಎಲ್ಲ ಕಾರುಗಳು ಗಾಳಿ ಶೀತಲ ಯಂತ್ರ ಒಳಗೊಂಡಿದ್ದರೂ, ಶುದ್ಧ ಗಾಳಿ ನೀಡುವಲ್ಲಿ ವಿಫಲವಾಗಿವೆ. ಆದರೆ ಎಂಜಿ ವಿದ್ಯುತ್ಚಾಲಿತ ಕಾರಿನಲ್ಲಿ ಗಾಳಿಯ ಫಿಲ್ಟರ್ ಅಳವಡಿಕೆ ಮಾಡಲಾಗಿದ್ದು ಇದರಿಂದ ಪ್ರಯಾಣಿಕರಿಗೆ ಶುದ್ದ ಗಾಳಿ ಲಭ್ಯವಾಗಲಿದೆ. ಕಾರು ಚಲಿಸುವಾಗ ಇಂಗಾಲದ ಪ್ರಮಾಣ ಎಷ್ಟಿದೆ ಹಾಗೂ ಎಷ್ಟು ಪ್ರಮಾಣದಲ್ಲಿ ಗಾಳಿ ಶುದ್ಧೀಕರಿಸಲಾಗಿದೆ ಎಂಬುದನ್ನು ತಿಳಿಸುತ್ತದೆ. ದೇಶದ ಮೊದಲ ಶ್ರೇಣಿಯ ಹಾಗೂ ಮೆಟ್ರೋ ನಗರಗಳಾದ ದೆಹಲಿ, ಬೆಂಗಳೂರು, ಹೈದರಾಬಾದ್, ಮುಂಬೈ ಹಾಗೂ ಅಹಮದಾಬಾದ್ನಲ್ಲಿ ಕಾರು ರಸ್ತೆಗೆ ಇಳಿಯಲಿದೆ.
ದೇಶದ ಪರಿಸರ ವ್ಯವಸ್ಥೆಗೆ ಎಂಜಿ ಮೋಟಾರ್ ಸಂಸ್ಥೆಯ ವಿದ್ಯುತ್ಚಾಲಿತ ಕಾರು ಉತ್ತಮ ಕೊಡುಗೆಯಾಗಿದೆ. ಈಗಾಗಲೇ ಇಂಗ್ಲೆಂಡ್, ಆಸ್ಟ್ರೇಲಿಯ, ಯುರೋಪ್ ಹಾಗೂ ಏಷ್ಯಾದ 10ಕ್ಕೂ ಹೆಚ್ಚು ರಾಷ್ಟ್ರಗಳ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಾಹನ ಮಾರಾಟ ಯಶಸ್ಸುಗಳಿಸಿದೆ. ಭಾರತದಲ್ಲಿಯೂ ಎಂಜಿ ಮೋಟರ್ನ ವಿದ್ಯುತ್ಚಾಲಿತಕಾರು ಯಶಸ್ವಿಯಾಗಲಿದೆ.