ಹಿರಿಯ ಸಾಹಿತಿ, ನಾಡೋಜ ಪಾಟೀಲ ಪುಟ್ಟಪ್ಪ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 102 ವರ್ಷದ ಪಾಟೀಲ ಪುಟ್ಟಪ್ಪ ಕಳೆದ ಒಂದು ತಿಂಗಳಿನಿಂದ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾಟೀಲ ಪುಟ್ಟಪ್ಪ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಅವರ ಆರೋಗ್ಯ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದರು.
ಹಾವೇರಿಯ ಕುರುಬಗೊಂಡಹಳ್ಳಿಯಲ್ಲಿ ತಂದೆ ಸಿದ್ದಲಿಂಗಪ್ಪ, ತಾಯಿ ಮಲ್ಲಮ್ಮ ಪುತ್ರರಾಗಿ ಜನಿಸಿದ್ದ ಪಾಟೀಲ ಪುಟ್ಟಪ್ಪ ವಿಜಾಪುರದಲ್ಲಿ ವಕೀಲಿ ವೃತ್ತಿ ಕೈಗೊಂಡಿದ್ದು, ಬಳಿಕ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟು ಮುಂಬೈಗೆ ತೆರಳಿದ್ದರು.