ಹೊಸ ವರ್ಷಾಚರಣೆಯ ಪ್ರಯುಕ್ತ|
ಮೈಸೂರಿನ 1ನೇ ಹಂತದಲ್ಲಿರುವ
ಶ್ರೀ ಯೋಗಾನರಸಿಂಹಸ್ವಾಮಿ
ದೇವಸ್ಥಾನದಲ್ಲಿ ಹೊಸ ವರ್ಷ
2020 ರ , ಜನವರಿ 1ರಂದು
ಭಕ್ತಾದಿಗಳಿಗೆ 2 ಲಕ್ಷ ಲಡ್ಡು
ಪ್ರಸಾದ ವಿತರಿಸಲಾಗುವುದು.
ದೇವಸ್ಥಾನದಲ್ಲಿ ಪ್ರೊ.ಭಾಷ್ಯಂ
ಸ್ವಾಮೀಜಿ – ಅವರು
ಸುದ್ದಿಗೋಷ್ಠಿಯಲ್ಲಿ ಈ ವಿಷಯ
ತಿಳಿಸಿದರು. ಅಂದು ಮುಂಜಾನೆ
4 ರಿಂದ ಮದ್ಯರಾತ್ರಿ 12 ಗಂಟೆಯವರೆಗೆ 2 ಕೆಜಿ
ತೂಕದ 10,000 ಹಾಗೂ 200 ಗ್ರಾಂ ತೂಕದ
2 ಲಕ್ಷ ಲಡ್ಡು ಪ್ರಸಾದವನ್ನು ಭಕ್ತರಿಗೆ ವಿತರಿಸಿಲಾಗುವುದು. ಡಿ.20 ರಿಂದ 31 ರವರೆಗೆ 50 ಮಂದಿ
ಬಾಣಸಿಗರು ಲಡ್ಡುಗಳನ್ನು ತಯಾರಿಸುವರು.
50 ಕ್ವಿಂಟಾಲ್ ಕಡ್ಲೆಹಿಟ್ಟು, 100 ಕ್ವಿಂಟಾಲ್ ಸಕ್ಕರೆ, 4000 ಲೀಟರ್ ಖಾದ್ಯ ತೈಲ, 200
ಕೆಜಿ ಗೋಡಂಬಿ, 200 ಕೆಜಿ ಒಣದ್ರಾಕ್ಷಿ, 100
ಕೆಜಿ ಬಾದಾಮಿ, 200 ಕೆಜಿ ಡೈಮಂಡ್ ಸಕ್ಕ
ರೆ, ಬೂರಾ ಸಕ್ಕರೆ, 10 ಕೆಜಿ ಪಿಸ್ತಾ, 20 ಕೆಜಿ ಏಲಕ್ಕಿ, 20 ಕೆಜಿ ಜಾಕಾಯಿ, 5 ಕೆಜಿ ಲವಂಗ
ಬಳಸಿ ಲಡ್ಡು ಪ್ರಸಾದ ತಯಾರಿಸಲಾಗುತ್ತದೆ.
ಅಂದು ಶ್ರೀ ಯೋಗಾನರಸಿಂಹಸ್ವಾಮಿ ದೇವರಿಗೆ
ವಿಶೇಷ ಅಲಂಕಾರ, ವಿಶೇಷ ತೋಮಾಲೆ,
ಸ್ವರ್ಣ ಪುಷ್ಪಗಳಿಂದ ಸಹಸ್ರನಾಮಾರ್ಚನೆ,
ದೇವಾಲಯದ ಉತ್ಸವ ಮೂರ್ತಿಗೆ ಏಕಾದಶ
ಪ್ರಾಕಾರೋತ್ಸವ ಸೇರಿದಂತೆ ವಿವಿಧ ಧಾರ್ಮಿಕ
ಕೈಂಕರ್ಯಗಳು ನಡೆಯಲಿದೆ ಎಂದು ತಿಳಿಸಿದರು.
ಶ್ರೀಯೋಗಾನರಸಿಂಹ ಸ್ವಾಮಿ ದೇವಸ್ಥಾನದ
ಆಡಳಿತಾಧಿಕಾರಿ ಎನ್.ಶ್ರೀನಿವಾಸ ಹಾಗೂ
ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು