ಕೊಳ್ಳೇಗಾಲ :ಅ 11: ಒಂದು ನಿಮಿಷದಲ್ಲಿ ನಾಲ್ಕು ತಟ್ಟೆ ಇಡ್ಲಿ ತಿಂದು ಜಯಗಳಿಸಿದ ಪತ್ರಕರ್ತರ ವಕೀಲ, ಪೊಲೀಸ್ ಮೂವರಿಗೆ ಕ್ರಮವಾಗಿ ಜಿಲ್ಲಾ ಸತ್ರ ನ್ಯಾಯಾದೀಸರಾದ ಬಸವರಾಜು ರವರು ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿದರು.ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಿವಿಧ ಇಲಾಖೆಗಳು, ಪ್ರಗತಿಪರ ಸಂಘ ಸಂಸ್ಥೆಗಳು ಮಹಿಳಾ ಸಂಘಗಳು ಹಾಗೊ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಸಂಗಮ2019ಕಾರ್ಯಕ್ರಮದಲ್ಲಿ ಸಂಜೆ ಇಡ್ಲಿ ಮೇಳ ಆಯೋಜನೆ ಮಾಡಲಾಗಿತ್ತು.
ಇದೇ ಸಂದರ್ಬದಲ್ಲಿ ಒಂದು ನಿಮಿಷದಲ್ಲಿ ನಾಲ್ಕು ತಟ್ಟೆ ಇಡ್ಲಿ ತಿನ್ನುವ ಸ್ಪರ್ದೆ ಏರ್ಪಡಿಸಲಾಗಿತ್ತು. 10_ಮಂದಿ ಸ್ಪರ್ದೆಮಾಡಿದ್ದವರಲ್ಲಿ ಒಂದು ನಿಮಿಷದಲ್ಲಿ ನಾಲ್ಕುಇಡ್ಲಿ ತಿಂದು ಮುಗಿಸುವ ಮೂಲಕ ರಾಜ್ಯ ಧರ್ಮ ಪತ್ರಿಕೆಯ ಮರಿಸ್ವಾಮಿ (ಸೊಮು)ರವರು ಪ್ರಥಮ ಸ್ಥಾನ ವಕೀಲರಾದ ಶೇಖರ್ ದ್ವಿತೀಯ, ಪೊಲೀಸ್ ರಾಜಣ್ಣ ತೃತೀಯಸ್ಥಾನದಲ್ಲಿ ಜಯಗಳಿಸಿದರು.
ಇವರಿಗೆ ಜಿಲ್ಲಾ ಸತ್ರ ನ್ಯಾಯಾದೀಸರಾದ ಬಸವರಾಜು ರವರು ಹಿರಿಯ ಸಿವಿಲ್ ನ್ಯಾಯಾದೀಸರಾದ ಎಸ್.ಜೆ ಕೃಷ್ಣ ರವರು ಡಿ.ವೈ.ಎಸ್.ಪಿ ವಿನಯ್ ಕುಮಾರ್ ವಿಜೇತರಾದವರೊಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿದರು.
ಕೊಳ್ಳೇಗಾಲದಲ್ಲಿ ಇದೇ ಮೊದಲ ಬಾರಿಗೆ ಅಹಾರ ಮೇಳ ಇಡ್ಲಿಮೇಳ ಏರ್ಪಡಿಸಿದ್ದರಿಂದ ವಿಷೇಶ ಕಾರ್ಯಕ್ರಮವಾಗಿತ್ತು. ಬಳೆಪೇಟೆಯ ವೇಣುಗೋಪಾಲರವರ ತಂಡ ಹಾಗೊ ವಾಗ್ದೆವಿ ವಿಪ್ರ ಮಹಿಳೆ ಸಂಘಟನೆ ಯವರು ಸಿರಿದಾನ್ಯಗಳಿಂದ ತಯಾರಿಸಲಗಿದ್ದ ಸಾವಿಗೆಪೊಂಗಲ್, ಕೊಲುಪಲಾವ್, ಅಂಮೃತ ಪಾಲಂ, ಸ್ವಪಿದ್ ಇಡ್ಲಿ, ರವೆ ಇಡ್ಲಿ ಸಾಮೆ ಸಿಹಿ ಪೊಂಗಲ್, ಮುಂತಾದ ಬಗೆಬಗೆಯ ರುಚಿಕರವಾದ ಖಾದ್ಯಗಳನ್ನು ತಯಾರಿಸಿದರು. ಇದನ್ನು ಖರೀದಿಸಿ ಬಯಿಚಪ್ಪರಿಸಿ ಸವಿಯುತ್ತಿದ್ದವರ ಮುಖದಲ್ಲಿ ಮಂದಹಾಸ ಮೂಡಿತ್ತು.
ನ್ಯಾಯಾದೀಸರು ಪೊಲೀಸ್ ಅಧಿಕಾರಿಗಳ ಹಾಗೂ ಪಟ್ಟಣದ ಗಣ್ಯರ ಕುಟುಂಬದ ಸದಸ್ಯರಾದಿಯಾಗಿ ಖಾದ್ಯಗಳನ್ನು ಸವಿದು ತಮ್ಮ ಅಡಿಗೆ ಮನೆಗೆ ರಜೆ ನೀಡಿದ್ದರು. ಇದರ ಜೊತೆಗೆ ಒಳ್ಳೆಯ ಮನರಂಜನೆಯನ್ನು ಏರ್ಪಡಿಸಿದ್ದ ನ್ಯಾಯಾಲಯ ಇಲಾಖೆ ಪೊಲೀಸ್ ಇಲಾಖೆಯವರ ಕಾಳಜಿಗೆ ಪಟ್ಟಣದ ಜನತೆ ಕೃತಜ್ಞತೆಯನ್ನು ಸಲ್ಲಿಸಿದರು.