ಮೈಸೂರು,ಆ.29:- ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಿನ್ನೆಲೆ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಚಿವ ಸೋಮಣ್ಣ ಪಾರಂಪರಿಕ ದಸರಾವನ್ನು ಒಗ್ಗಟ್ಟಾಗಿ ಆಚರಿಸಬೇಕು. 65 ಜನ ನಗರ ಪಾಲಿಕೆ ಸದಸ್ಯರ ಜೊತೆ ಸಭೆ ನಡೆಸಿ ಬಂದಿದ್ದೇನೆ.
ಅವರ ಭಾವನೆಗಳನ್ನು ತಿಳಿದುಕೊಂಡಿದ್ದೇನೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಿಮ್ಮ ಜೊತೆ ಕೂಡ ಸಭೆ ನಡೆಸುತ್ತಿದ್ದೇನೆ. ಸಿಎಂ ಆಗಮನ ಹಿನ್ನಲೆ ಸಭೆ ಆರಂಭವಾಗಿದೆ ನಿಮ್ಮಲ್ಲಿ ಕ್ಷಮೆ ಕೇಳ್ತೇನೆ. ಈ ಬಾರೀ ಮೈಸೂರು ನಗರದಲ್ಲಿ ಮನೆ ಮನೆ ದಸರಾ ಮಾಡಬೇಕು ಎಂದುಕೊಂಡಿದ್ದೇನೆ. ಗ್ರಾಮೀಣ ದಸರಾ ಆಯೋಜಿಸಬೇಕು ಹಾಗಾಗಿ ನಿಮ್ಮ ಸಹಾಯ ಕೇಳಲು ಬಂದಿದ್ದೇನೆ ಎಂದರು.
ನಾನು ಒಬ್ಬ ನಗರ ಪಾಲಿಕೆ ಸದಸ್ಯನಾಗಿ ಬಂದವನು. ಜನರ ಮಧ್ಯೆ ನಾವಿದ್ದರೆ ಜನರೇ ನಮ್ಮ ಕೈ ಹಿಡಿಯುತ್ತಾರೆ ಅನ್ನೋದಕ್ಕೆ ನಾನೇ ಉದಾಹರಣೆ. ನಿಮ್ಮೆಲ್ಲರ ಸಹಕಾರದಿಂದ ದಸರಾ ಉತ್ಸವ ಅದ್ದೂರಿಯಾಗಿ ಆಚರಿಸೋಣ. ನನ್ನ ವೈಯುಕ್ತಿಕವಾಗಿ, ಸರ್ಕಾರದ ಪರವಾಗಿ ದಸರಾ ಮಹೋತ್ಸವಕ್ಕೆ ಸ್ವಾಗತಿಸುತ್ತೇನೆ. ಗ್ರಾಮೀಣ ದಸರಕ್ಕೆ ಸಭೆಯಲ್ಲಿ ಒತ್ತಾಯಿಸಿದ್ದರಿಂದ ಗ್ರಾಮೀಣ ದಸರಾ ಮಾಡುತ್ತೇವೆಂದು ಸೋಮಣ್ಣ ಭರವಸೆ ನೀಡಿದರು.
ಯುವ ಸಂಭ್ರಮದಿಂದ ದಸರಾ ಜಂಬೂ ಸವಾರಿಯವರಗೆ ನಡೆಯುವ ಕಾರ್ಯಕ್ರಮಕ್ಕೆ ವಿವಿಐಪಿ ಪಾಸ್ ನೀಡಿ ಎಂದು ಸದಸ್ಯರ ಒತ್ತಾಯಿಸಿದರು. ಸದಸ್ಯರ ಒತ್ತಾಯದ ಮೇರೆಗೆ ಜಂಜೂ ಸವಾರಿಯಂದು ಜಿಲ್ಲಾ ಪಂಚಾಯತಿಯ 49 ಸದಸ್ಯರು, 65 ಜನ ನಗರ ಪಾಲಿಕೆ ಸದಸ್ಯರಿಗೆ ಆಸನ ವ್ಯವಸ್ಥೆ ಮಾಡುತ್ತೇನೆ ಎಂದರು. ಯಡಿಯೂರಪ್ಪ ಸಿಎಂ ಆದ ನಂತರ ಕೋಟಿ ಕೋಟಿ ಅಭಿವೃದ್ಧಿ ಆಗ್ತಿದೆ. ಇದು ದುಡ್ಡಿನ ಕಾರ್ಯಕ್ರಮ ಅಲ್ಲ, ಜನರ ಕಾರ್ಯಕ್ರಮ. ಗ್ರಾಮೀಣ ದಸರೆಗೆ ಒಂದೊಂದು ತಾಲೂಕಿಗೂ 5 ಲಕ್ಷ ಬಿಡುಗಡೆ ಮಾಡುತ್ತೇನೆ.
ಈಗಲೇ ಹಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ. ಗ್ರಾಮೀಣ ಪ್ರದೇಶದಿಂದ ಆಗಮಿಸುವ ಜನರಿಗೆ ಬಸ್ ವ್ಯವಸ್ಥೆ ಮಾಡುತ್ತೇನೆ. ಸ್ನೇಹದ ಸೇತುವೆಯನ್ನು ಕಟ್ಟೋದು ಸುಲಭದ ಮಾತಲ್ಲ. ಆದ್ದರಿಂದ ಎಲ್ಲರೂ ಒಟ್ಟಿಗೆ ದಸರಾ ಕಾರ್ಯಕ್ರಮ ನಡೆಸಿ ಯಶಸ್ವಿಗೊಳಿಸೋಣ ಎಂದರು. ನಂತರ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಗ್ರಾಮೀಣ ತಾಲೂಕುಗಳಿಗೆ ದಸರಾ ಕಾರ್ಯಕ್ರಮಕ್ಕೆ 5 ಲಕ್ಷ ಕೊಡುತ್ತಿರುವುದು ಸ್ವಾಗತಾರ್ಹ.
ದಸರಾ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ತಡವಾಗಿ ತಲುಪುತ್ತದೆ. ಆದ್ದರಿಂದ ಈ ಬಾರಿ ಆದಷ್ಟು ಬೇಗ ಆಹ್ವಾನ ಪತ್ರಿಕೆ ತಲುಪಿಸುವಂತೆ ಮನವಿ ಮಾಡಿದರು. ರಾಜ್ಯದಲ್ಲಿ ನೆರೆ ಪರಿಸ್ಥಿತಿ ಎದುರಾಗಿದ್ದು, ಆದಷ್ಟು ಬೇಗ ಜನರ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಬಳಿಕ ಮಾತನಾಡಿದ ಅನಿಲ್ ಚಿಕ್ಕಮಾದು ಆದಿವಾಸಿಗಳು ಹೆಚ್ಚಿರುವ ಕಾರಣ ಅವರಿಗೆ ದಸರಾ ನೋಡುವ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಎಲ್.
ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಜಿ.ಪ.ಸಿಇಓ ಜ್ಯೋತಿ,ಪರಿಮಳ ಶ್ಯಾಮ್, ಗೌರಮ್ಮ ಸೋಮಶೇಖರ್, ಗೋ.ಮಧುಸೂದನ್, ಕಮೀಷನರ್ ಕೆ.ಟಿ.
ಬಾಲಕೃಷ್ಣ, ರಿಷ್ಯಂತ್ ಭಾಗಿಯಾಗಿದ್ದರು