ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೂ ಸಂಘಕ್ಕೂ ಸಂಬಂಧವಿಲ್ಲ; ಕಲ್ಲಡ್ಕ ಪ್ರಭಾಕರ್​ ಭಟ್

ಮೈಸೂರಿನ Crystal Park Hotel ನಲ್ಲಿ ಇಂದು ಪ್ರಾರಂಭವಾದ Suvarna Fish Land Hotel ಉದ್ಘಾಟನೆಗೆ ಭಾಗವಹಿಸಿದ್ದ ಅವರು ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಅರಿತ ಕಮಲ ಪಾಳಯದಲ್ಲಿ ಆಕಾಂಕ್ಷಿಗಳ ಪಟ್ಟಿ ಕೂಡ ಬೆಳೆಯುತ್ತಿದೆ. ಈ  ಹಿನ್ನೆಲೆಯಲ್ಲಿ ದಿನಕ್ಕೆ ಒಬ್ಬರು ತಾವು ಕೂಡ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆಗಳನ್ನು ನೀಡುತ್ತಾ, ಆರ್​ಎಸ್​ಎಸ್​ ನಾಯಕರ ದುಂಬಾಲು ಬಿದ್ದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಆರ್​ಎಸ್​ಎಸ್​ ಸಹ ಸಂಚಾಲಕ ಕಲ್ಲಡ್ಕ ಪ್ರಭಾಕರ್​ ಭಟ್​ , ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೂ ಸಂಘಕ್ಕೂ ಸಂಬಂಧವಿಲ್ಲ. ಈ ವಿಚಾರದಲ್ಲಿ ಸಂಘ ಮೂಗು ತೂರಿಸುವುದಿಲ್ಲ. ಇದನ್ನು ಪಕ್ಷ ನೋಡಿಕೊಳ್ಳಲಿದೆ. ಸಂಘಕ್ಕೂ ಇದಕ್ಕೂ ಸಂಬಂಧವಿಲ್ಲ. ಸಂಘದಿಂದ ಯಾರು ಕೂಡ ಆಕಾಂಕ್ಷಿಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ
ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಲ್ಲಡ್ಕ, ಕರ್ನಾಟಕ ರಾಜ್ಯದ 70 ವರ್ಷಗಳ ಇತಿಹಾಸದಲ್ಲಿ ಸರ್ಕಾರವೇ ಇಲ್ಲ ಎನ್ನುವ ಸ್ಥಿತಿ ಈಗ ನಿರ್ಮಾಣವಾಗಿದೆ. 37 ಸ್ಥಾನ ಇರುವ ಪಕ್ಷದವರು ಮುಖ್ಯಮಂತ್ರಿಯಾಗಿದ್ದಾರೆ. ಈ ಸರ್ಕಾರ ಚುನಾವಣಾ ಫಲಿತಾಂಶದ ಬಳಿಕ ಬೀಳಲಿದೆ ಎಂದರು.

  1. ಸರ್ಕಾರ ರಚನೆಯಾಗಿ ಒಂದು ವರ್ಷ ಆಗುತ್ತಿದೆ. ಆದರೆ, ಎಲ್ಲಿಯೂ ಸರ್ಕಾರ ಇದೆ ಅಂಥ ಅನ್ನಿಸುತ್ತಿಲ್ಲ. 37 ಸ್ಥಾನ ಗೆದ್ದಿರುವ ಪಕ್ಷದವರು ಮುಖ್ಯಮಂತ್ರಿಯಾಗಿದ್ದಾರೆ ಎಂದರೆ ಏನು ಹೇಳೋಣ..?  ರಾಜಕೀಯ ಕಿತ್ತಾಟಗಳಿಂದಾಗಿ ಸರ್ಕಾರವೇ ಇಲ್ಲವಾಗಿದೆ. ಈ ಸರ್ಕಾರ ಯಾವಾಗ ಬೇಕಾದರೂ ಬಿದ್ದುಹೋಗಬಹುದು. ಅದು ಮೇ.23ರ ನಂತರವೂ ಆಗಬಹುದು. ಈ ಸರ್ಕಾರ ಹೆಚ್ಚುದಿನ ಉಳಿಯೋದಿಲ್ಲ ಎಂದು ಭವಿಷ್ಯ ನುಡಿದರು.
Translate