ವಿಜಯದಶಮಿ ಶುಭಾಶಯ ಕೋರಿದ ಸಿಎಂ ಯಡಿಯೂರಪ್ಪ: ಚಾಮುಂಡಿಗೆ ಪುಷ್ಪನಮನ ಸಲ್ಲಿಸಲಿರುವ ಬಿಎಸ್​ವೈ

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ವಿಜಯದಶಮಿ ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು ತಾಯಿ ಚಾಮುಂಡೇಶ್ವರಿ ಹಾಗೂ ಶ್ರೀ ದುರ್ಗಾ ಮಾತೆಯ ಅನುಗ್ರಹ ನಮ್ಮೆಲ್ಲರಿಗೂ ಸನ್ಮಂಗಲವನ್ನುಂಟುಮಾಡಲಿ. ವಿಜಯದಶಮಿಯು ಸಮಸ್ತ ಜನರ ಜೀವನದಲ್ಲೂ ಜಯವನ್ನು ಕರುಣಿಸಲಿ. ಸಂತೋಷ, ಸಮೃದ್ಧಿ ಮತ್ತು ಪ್ರಗತಿಯನ್ನು ತರಲಿ ಎಂದು ಶುಭಕೋರಿದ್ದಾರೆ.

ಅರ್ಜುನ ಆನೆ ಹೊತ್ತ ಅಂಬಾರಿ ಮೇಲೆ ಇಡುವ ಚಾಮುಂಡಿದೇವಿಗೆ ಸಂಜೆ 4.31ರಿಂದ 4.57ರ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪ ನಮನ ಸಲ್ಲಿಸಲಿದ್ದಾರೆ.

Translate