ವಿ.ಜಿ. ಸಿದ್ದಾರ್ಥ್ ಹೆಗ್ಗಡೆ ಮಂಗಳೂರಿನ ಬಳಿ ನೇತ್ರಾವತಿ ನದಿ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ರಾಜ್ಯದ ಖ್ಯಾತ ಉದ್ಯಮಿ, ಮಾಜಿ ಮುಖ್ಯಮಂತ್ರಿ ಎಸ್.ಎಮ್. ಕೃಷ್ಣ ರವರ ಅಳಿಯ ವಿ.ಜಿ. ಸಿದ್ದಾರ್ಥ್ ಹೆಗ್ಗಡೆ ಮಂಗಳೂರಿನ ಬಳಿ ನೇತ್ರಾವತಿ ನದಿ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ಸೋಮವಾರ ಸಂಜೆ ಮಂಗಳೂರಿನ-ಉಳ್ಳಾಳ ನಡುವೆ ಇರುವ ಶರಾವತಿ ಬ್ರಿಡ್ಜ್ ಮೇಲೆ ನಾಪತ್ತೆಯಾಗಿದ್ದ ಸಿದ್ದಾರ್ಥ್ ಗಾಗಿ ಸತತ 36 ಗಂಟೆಗಳ ಹುಡುಕಾಟದ ಕಾರ್ಯಾಚರಣೆ ನಡೆಸಿದ ನಂತರ ಇಂದು ಹೊಯ್ಗೆಬಜಾರ್ ಬಳಿ ಮೀನುಗಾರರು ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಸಿದ್ದಾರ್ಥ್ ಮೃತದೇಹ ಪತ್ತೆಯಾಗಿದೆ.
ಖ್ಯಾತ ಉದ್ಯಮಿಯಾಗಿದ್ದ ಸಿದ್ದಾರ್ಥ್ ದೇಶ ವಿದೇಶಗಳಲ್ಲಿ ಪ್ರಸಿದ್ಧ ಪಡೆದಿರುವ ಕೆಪೆ ಕಾಪೀ ಡೇ ಸಂಸ್ಥಾಪಕರು. ಹಾಗೂ ಮೈಡ್ ಟ್ರೀ ಸಾಫ್ಟ್‌ವೇರ್ ಕಂಪನಿ, ಆಂಬರ್ ವ್ಯಾಲಿ ರೆಸಿಡೆನ್ಸಿಯಲ್ ಶಾಲೆ, ಸೆರಾಯಿ ರೆಸಾರ್ಟ್, ಕಾಪೀ ಡೇ ಹೋಲ್ಡಿಂಗ್ಸ್ ಕಂಪನಿ ಈಗೆ ಹತ್ತಾರು ಯಶಸ್ವಿ ಉದ್ಯಮಗಳನ್ನು ಹೊಂದಿದ್ದರು. ಪ್ರೋರ್ಬ್ಸ್ ಪ್ರಕಟಿಸಿದ್ದ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ ಸಿದ್ದಾರ್ಥ್. ಮಳೆನಾಡಿನ ಸಾವಿರಾರು ಮಂದಿಗೆ ಅನ್ನದಾತರಾಗಿದ್ದರು. ಮಂಗಳೂರು ಕಾಪೀಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಟ್ಟ ಕನ್ನಡಿಗ ವಿ.ಜಿ.ಸಿದ್ದಾರ್ಥ ಸಾವು ರಾಜ್ಯಕ್ಕೆ ದೇಶಕ್ಕೆ ತುಂಬಲಾರದ ನಷ್ಟ.

Translate