ಮೈಸೂರು ಬ್ರಾಹ್ಮಣ ಸಂಘ ಮತ್ತು ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ದಿನಾಂಕ 24-05-2019 |
ರಿಂದ 26-05-2019 ರವರೆಗೆ ಮೂರು ದಿನಗಳ ಕಾಲ ಬ್ರಾಹಣ ಯುವಕರ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್
ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಬ್ರಾಹ್ಮಣ ಯುವಕರನ್ನು ಕ್ರೀಡಾ ಮನೋಭಾವ ಪ್ರೋತ್ಸಾಹಿಸುವ ನಿಟ್ಟಿನಲ್ಲಿ
ಹಾಗೂ ಸಂಘಟನಾತ್ಮಕವಾಗಿ ಒಗ್ಗೂಡಿಸುವ ಸಲುವಾಗಿ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು.
ಶಿವಮೊಗ್ಗ: ಹುಬ್ಬಳ್ಳಿ, ಬಾಗಲಕೋಟಿ, ಉಡುಪಿ, ಕಾರವಾರ, ದಕ್ಷಿಣಕನ್ನಡ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಮಂಡ್ಯ,
ಹಾಸನ ಸೇರಿದಂತೆ 25ಕ್ಕೂ ಹೆಚ್ಚು ಜಿಲ್ಲೆಗಳಿಂದ ತಂಡಗಳು ಭಾಗವಹಿಸಲಿದೆ. ಆಗಮಿಸುವ ತಂಡದ ಆಟಗಾರರಿಗೆ
ವೇದಿಕೆಯ ವತಿಯಿಂದ ವಸತಿ ಮತ್ತು ಭೋಜನದ ಸಕಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಮೈಸೂರಿನಲ್ಲಿ ಬ್ರಾಹ್ಮಣ
ಸಂಘಟನೆ ಹೋರಾಟದ ಮೂಲಕ ರಾಜ್ಯದ ಗಮನ ಸೆಳೆದಿದ್ದು ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮತ್ತು
ಶಂಕರ ಜಯಂತಿ ಆಚರಣೆ ರಾಜ್ಯ ಸರ್ಕಾರದಿಂದ ಜಾರಿಗೆ ಬಂದಿರುವುದು ಸ್ವಾಗತಾರ್ಹ. ಮುಂದಿನ ದಿನದಲ್ಲಿ ಬ್ರಾಹ್ಮಣ
ಸಮುದಾಯದ ಆರ್ಥಿಕವಾಗಿ ಹಿಂದುಳಿದ ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕೆ ಹಿರಿಯ ನಾಗರೀಕರ ಆರೋಗ್ಯ
ಕ್ಷೇಮಕ್ಕೆ ವಿಪ್ರ ಮಹಿಳೆಯರ ಸ್ವಸಹಾಯ ಸಂಘದ ಸಹಕಾರಿ ಯೋಜನೆಗಳಿಗೆ ಅವಶ್ಯಕ ಇರುವ ಜಾತಿ ಪ್ರಮಾಣ ಪತ್ರ
ಸರ್ಕಾರದಿಂದ ಬೇಕಾಗಿದ್ದು ಇನ್ನಿತರ ಸವಲತ್ತು ಸೇರಿದಂತೆ ಶ್ರೀ ಶಂಕರ ಕಪ್ ಪಂದ್ಯಾವಳಿಯ ಮುಖಾಂತರ
ಆಗ್ರಹಿಸಲಾಗುವುದು. ಪಂದ್ಯಾವಾಳಿಯಲ್ಲಿ ಜಯಶಾಲಿ ಆಗುವ ಪ್ರಥಮ ತಂಡಕ್ಕೆ ರೂ. 30000/- ನಗದು ಮತ್ತು
ಟ್ರೋಫಿ, ದ್ವಿತೀಯ ಬಹುಮಾನ ರೂ. 20000/- ಮತ್ತು ಟ್ರೋಫಿ, ಮತ್ತು ತೃತೀಯ ಬಹುಮಾನ ರೂ.10000/- ಮತ್ತು
ಟೋಪಿ ಹಾಗೂ ಭಾಗವಹಿಸುವ ಎಲ್ಲಾ ಆಟಗಾರರಿಗೂ ಪ್ರಮಾಣ ಪತ್ರ ನೀಡಲಾಗುವುದು.